ವೇದಗಣಿತ ನಮ್ಮ ಜೀವನದ ವೇಗ ಗಣಿತ

******ವೇದ ಗಣಿತ ಕಾರ್ಯಗಾರ*******
ವೇದಗಣಿತ ಅಂಕಗಣಿತದ ಕಾರ್ಯಚರಣೆಗಳನ್ನು ತ್ವರಿತವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಪ್ರಾಚೀನ ತಂತ್ರಗಳು ಮತ್ತು ತಂತ್ರಗಳ ಸಂಗ್ರಹ ಗೊಳಿಸಲು ವೇದಮಠವು ವೇದಗಳಿಂದ ಬರುತ್ತದೆ ಎಂದು ಜೇಸಿಐ ಅಧ್ಯಕ್ಷರಾದ ಮುನಿವೆಂಕಟರಮಣಪ್ಪ ತಿಳಿಸಿದರು.
   ವಿಜಯಪುರದ ಪಟ್ಟಣದ ಸೀನಿಯರ್ ಚೇಂಬರ್ ವಿಜಯಪುರ ಲೀಜನ್ ಮತ್ತು ಜೇಸಿಐ ವಿಜಯಪುರ ಸಂಯುಕ್ತ ಆಶ್ರಯದಲ್ಲಿ * ವೇದಗಣಿತ* ಕಾರ್ಯಾಗಾರವನ್ನು ಎಂ.ಎಸ್.ಆರ್ ಸಂಕೀರ್ಣದಲ್ಲಿ ಹಮ್ಮಿಕೊಳ್ಳಲಾಗಿತ್ತು .
   ಈ ಕಾರ್ಯಗಾರದಲ್ಲಿ ಸೀನಿಯರ್ ಚೇಂಬರ್ ವಿಜಯಪುರ ಲೀಜನ್ ಅಧ್ಯಕ್ಷರಾದ ಡಾ ಎಂ ಶಿವಕುಮಾರ್ ರವರು ಮಾತನಾಡುತ್ತಾ ಉಡುಪಿಯ ಜಗದ್ಗುರು ಶ್ರೀ ಭಾರತಿ ಕೃಷ್ಣ ತೀರ್ಥಜಿ ಜಿಮಹಾರಾಜ ಎಂಬುವರು 1911 ರಿಂದ 1918ರಲ್ಲಿ ವೇದಗಣಿತಕ್ಕೆ ಪುನರ್ಜೀವನಗೊಳಿಸಿ ಗಣಿತದ 16 ಸೂತ್ರಗಳನ್ನು ಮರು ಪರಿಶೀಲನೆ ಮಾಡಿ 1957ರಲ್ಲಿ ವೇದಿಕ್ ಗಣಿತ ಎಂಬ ಪುಸ್ತಕ ಬರೆದರು. 1965ರಲ್ಲಿ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು.
 ******* ವೇದಗಣಿತದ ಪ್ರಯೋಜನಗಳು*****
ಪ್ರಾಥಮಿಕ ಲೆಕ್ಕಾಚಾರವನ್ನು ಹತ್ತರಿಂದ ಹದಿನೈದು ಪಟ್ಟಿ ವೇಗವಾಗಿ ಮಾಡುತ್ತದೆ ತಪ್ಪಾದರೆ ಊಹಗೆ ಸಹಾಯ ಮಾಡುತ್ತದ. ಎಲ್ಲಾ ತರಗತಿಗೆ ಉಪಯುಕ್ತವಾಗುತ್ತದೆ . ಬೆರಳು ಎಣಿಕೆ ಮತ್ತು ಬದಲಾವಣೆ ಕೆಲಸವನ್ನು ಕಡಿಮೆ ಮಾಡಲು ಒಂದು ತಾಂತ್ರಿಕ ಸಾಧನ. ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಸಿಲ್ಲಿ ತಪ್ಪುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ . ಎಂದು ತಿಳಿಸುತ್ತಾ ಮಕ್ಕಳಾದ ಸಾವು ಗಣಿತವನ್ನು ಅರ್ಥ ಮಾಡಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಕೊಳ್ಳಬೇಕೆಂದು ಕರೆ ನೀಡಿದರು.
    ಈ ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ವಿ ವೆಂಕಟೇಶ್ ಸಂಸ್ಥಾಪಕ ಅಧ್ಯಕ್ಷರಾದ ಸುಬ್ರಹ್ಮಣ್ಯ ಶೆಟ್ಟಿ ಉಪಾಧ್ಯಕ್ಷರಾದ ಜೆ.ಆರ್ ಮುನಿ ವೀರಣ್ಣ ಸಮಾಜ ಸೇವಕರಾದ ಮುರುಳಿ ಮಗು ರವರು ಉಪಸ್ಥಿತರಿದ್ದರು.

Comments

Popular posts from this blog