ಮದ್ಯವರ್ಜನ ಶಿಬಿರ
*"ನಿನ್ನ ನೀ ಪರಿವತಿ೯ಸಿ ಕೋ"*
ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್ ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಬಿ ಸಿ ಟ್ರಸ್ಟ್ ಜನಜಾಗೃತಿ ವೇದಿಕೆ ಹಾಗೂ ಇತರ ಸಂಘ ಸಂಸ್ಥೆಗಳ ಸಯೋಗದೊಂದಿಗೆ ಬಾಲೇಪುರದ
ಶ್ರೀ ಮುದ್ದಮ್ಮ ಕಾಕಣ್ಣ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ 1870ನೇ ಮಧ್ಯವರ್ಜನ ಶಿಬಿರದಲ್ಲಿ ಸೀನಿಯರ್ ಛೇಂಬರ್ ಇಂಟರ್ನ್ಯಾಷನಲ್ ನ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ. ಎಂ ಶಿವಕುಮಾರ್ ತರಬೇತಿ ನೀಡಿ ಮಾತನಾಡುತ್ತಾ ನಿಮ್ಮನ್ನು ನೀವೇ ಪರಿವರ್ತಿಸಿಕೊಳ್ಳಬೇಕು ಬೇರೆ ಯಾರಿಂದಲೂ ನಿಮ್ಮ ಪರಿವರ್ತನೆ ಸಾಧ್ಯವಿಲ್ಲ, ದುಶ್ಚಟಗಳಿಂದ ಮುಕ್ತರಾಗಿ ನವ ಜೀವನವನ್ನು ಸಾಗಿಸಿ ಇತರರಿಗೆ ಆದರ್ಶಪ್ರಾಯರಾಗಿ ಎಂದು ಕರೆ ನೀಡಿದರು
ಚಲನಚಿತ್ರ ಸಾಹಿತಿಗಳು ಹಾಗೂ ನಿರ್ದೇಶಕರಾದ ವಸಂತ್ ಕುಮಾರ್ ಅವರು ಮಾತನಾಡುತ್ತಾ, ನಾವು ಈ ಚಟ ಬಿಡುವುದರಿಂದ ನಮ್ಮ ಕುಟುಂಬ ಸಮಾಜ ಆರೋಗ್ಯಕರವಾಗಿರುತ್ತೆ ಅದರಿಂದ ದುಶ್ಚಟಗಳಿಗೆ ದಾಸರಾಗದೆ, ನಿಮ್ಮ ಕುಟುಂಬಕ್ಕೆ ಪ್ರೀತಿ ಪಾತ್ರರಾಗುವಂತೆ ಜೀವನ ನಡೆಸಿ ಎಂದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸೀನಿಯರ್ ಛೇಂಬರ್ ನ ಅಧ್ಯಕ್ಷರಾದ ಕೆ ವೆಂಕಟೇಶ್ ಮಾತನಾಡುತ್ತಾ ನಮ್ಮ ತಾಲೂಕಿನಲ್ಲಿ ಬಹಳಷ್ಟು ಜನ ಈ ಮಧ್ಯ ವ್ಯಸನಿ ಗಳು ಇದ್ದು ಇಲ್ಲಿರುವ ನಿಮಗೆ ಮಾತ್ರ ಪರಿವರ್ತನೆಯಾಗುವ ಅವಕಾಶವನ್ನು ಆ ಮಂಜುನಾಥ ಮಾಡಿಕೊಟ್ಟಿದ್ದಾನೆ ಆದ್ದರಿಂದ ಈ ಅವಕಾಶವನ್ನ ಅದು ಉಪಯೋಗ ಮಾಡಿಕೊಳ್ಳಿ ಎಂದರು
Comments
Post a Comment